ರೇಶ್ಮಾರಾವ್ ಸೊನ್ಲೆ
ಒಳಗೆ, ದಿಡ್ಡಿ ಬಾಗಿಲು ಮುಚ್ಚಿದ ಕೋಣೆಯೊಳಗೆ ಅದೇನೇನು ನಡೆಯುತ್ತಿದೆಯೋ? ಬಾಗಿಲ ಸಂದಿಯಲಿ, ಬೀಗ ಜಡಿಯುವ ಕಿಂಡಿಯಲಿ ಸಣ್ಣದಾಗಿ ಹಳದಿ ಬೆಳಕು ಹೊಳೆಯುತ್ತಿದೆ. ಮುಚ್ಚಿಡಲಾಗದ ಮಿನುಗು, ಕಣ್ಣ ರೆಪ್ಪೆಯ ಸೋಲಿಸಿ ಅಲ್ಲಿಗೂ ರಾಚಿದೆ. ಹೊರಗಿನಿಂದ ಹೋಗಿ ಒಳಗೇ ಬಂಧಿಯಾದ ಬೆಳಕು. ಇಷ್ಟು ವರ್ಷದ ಕತ್ತಲ ಕೋಣೆಗೆ ದೊಂದಿ ಹಚ್ಚಲಾಗಿದೆ. ಕಪ್ಪನ್ನು ಓಡಿಸಿದ್ದಾಯಿತು. ಆದರೆ ತನ್ನೊಳಗಿನ ದಿಗ್ದರ್ಶನ ಮಾಡಿಸಿದ ಬೆಳಕನ್ನು ಹಿಡಿದಿಡಬೇಡವೇ? ಅದಕ್ಕೇ ಕಾವಲು ಕೂತಿರುವುದು. ಕಾವಲಲ್ಲೇ ಕಾಲಹರಣ. ದಿನದಂತಿದ್ದೇನೆ ಎಂಬ ಪ್ರಯತ್ನಪೂರ್ವಕ ಮುಖಚರ್ಯೆಯಲೂ ಏರುಮುಖದಲಿ ಸಾಗುತ್ತಿರುವ ಸಂಭ್ರಮದ ಸಂಭ್ರಮವನ್ನು ಹಿಡಿಯುವವರಿಲ್ಲ. ಏನಿಲ್ಲ, ಏನಿಲ್ಲ ಎಂಬ ನಾಲಗೆಯ ಸುಳ್ಳಿಗೆ ತುಟಿ ಸಣ್ಣದಾಗಿ ನಗುತ್ತಿದೆ. ಜಗತ್ತು ಕುಗ್ಗುತ್ತಾ ಕುಗ್ಗುತ್ತಾ ಒಂದೇ ಜೀವದ ಸುತ್ತ ಮನಸ್ಸು ಹಿಗ್ಗುತ್ತಿದೆ.
ಮೊದಲಿನಿಂದಲೂ ಮನಸ್ಸಿಗೆ ಮುಖ ಕನ್ನಡಿಯಾಗದಿರಲಿ ಎಂದೇ ಎಚ್ಚರ ವಹಿಸಿ, ಈಗ ಅದರಲ್ಲೇನೋ ನಾಚಿಕೆಯ ಸಡಗರ ಸೇರಿದ ಮೇಲೆ, ಯಾರು ನೋಡಿಬಿಟ್ಟಾರೋ ಎಂಬ ಆತಂಕದಲಿ, ನೋಡಲಿ ಎಂಬ ಒಳಗೊಳಗೇ ಕಂಡೂಕಾಣದ ಸಣ್ಣ ಅಲ್ಲವೆಂಬ ಆಸೆಯಲಿ ಭಾವನೆಗಳನ್ನು ಇನ್ನಷ್ಟು ಭದ್ರಗೊಳಿಸಿ ಇಟ್ಟಾಗಿದೆ. ಬೆಳಕಿನ ಕೈಗೆ ಸಿಕ್ಕ ಒಂದೊಂದೇ ಭಾವನೆಯನ್ನು ತಿರುಗಿಸಿಮುರುಗಿಸಿ ನೋಡುವ ಸುಖ ಈಗ... ಎಲ್ಲವೂ ಹೊಸತರಂತೆ, ತನ್ನೊಳಗಿಲ್ಲದ್ದೇನೋ ಆವಾಹಿಸಿಕೊಂಡಂತೆ ಕಾಣುತ್ತಿವೆ. ಇನ್ನೂ ಬಚ್ಚಿಟ್ಟ ಜೀವದೊಂದಿಗೆ ಮಾತನಾಡಿಲ್ಲ. ಈಗ ಮಾತು ಬೇಕಿಲ್ಲ. ಅಪಹರಣ ಮಾಡಿದ್ದೇನೆಂದುಕೊಂಡೇ ಸಿಕ್ಕಿಬೀಳದಿರಲು ಇಷ್ಟೆಲ್ಲ ಎಚ್ಚರ ವಹಿಸಬೇಕಾಗಿದೆ. ತಪ್ಪಿಸಿಕೊಳ್ಳದಂತೆಯೂ ನೋಡಬೇಕಲ್ಲ...ಆದರೀಗದೇಕೋ ಅಪಹರಣ ಪಡಲ್ಪಟ್ಟ ಸೂಚನೆಗಳು ದಿಗಿಲಿಗೀಡು ಮಾಡಿ, ತಳಮಳ ಹುಟ್ಟಿಸಿವೆ.
ಈ ಅಪಹರಣ ಆಪರೇಶನ್‌ಗಾಗಿ ತೆತ್ತ ಮೊತ್ತವೆಂದರೆ ನಿದ್ರೆ. ಕಣ್ಗಳನ್ನು ಮುಚ್ಚದೇ ಒಳಗನ್ನು ನೋಡುತ್ತಾ, ಕಾಯುತ್ತಾ, ಕನವರಿಸುತ್ತಾ, ಮುಚ್ಚಿಡುತ್ತಾ, ಅವುಗಳ ಮೇಲೆ ತೆವಳುತ್ತಾ ಕೂರಬೇಕಿದೆ. ಇದು ನಿದಿರೆಗಿಂತ ಹೆಚ್ಚು ಮದಿರೆ ಕುಡಿದ ಅಮಲು. ಆಡಿ ಬಿಟ್ಟ ಮಾತುಗಳು ಮರೆತು ಹೋಗದಂತೆ ಹಿಡಿದಿಡುವ ಭರದಲ್ಲಿ ಗೊತ್ತಿಲ್ಲದೆಯೇ ಕಚ್ಚಿಸಿಕೊಳ್ಳುವ ತುಟಿಗಳು. ವರ್ಷಗಳ ಕಹಿಯನ್ನು ಪ್ರವಾಹದಂತೆ ಕೊಚ್ಚಿ ಸಿಹಿನೆನಪುಗಳಾಗುತ್ತಿರುವ ಕ್ಷಣಗಳು. ಜೀವವನ್ನು ಒಳಗೆಳೆದುಕೊಳ್ಳುವ, ಜೀವಕ್ಕೆ ಜೀವವಾಗಿಸಿಕೊಳ್ಳುವ ಪ್ರಕ್ರಿಯೆ ಇದೇ ಏನೋ.
ತೀರಾ ಸಾಮಾನ್ಯವಾದ ಹಲವುಗಳನ್ನು ಅಸಾಮಾನ್ಯವೆಂದು ನೋಡುವ, ವಿಶೇಷವೆನಿಸುವಂತೆ ಮಾಡುವ ಈ ಬೆಳಕಿನ ಚಮತ್ಕಾರ ಸಿದ್ಧಿಗೆ ಅಗೋಚರ, ಅನಿರ್ದಿಷ್ಟ, ಅಸ್ಪಷ್ಟ ಹಾದಿಯಲ್ಲಿ ಇಪ್ಪತ್ನಾಲ್ಕು ವರ್ಷಗಳ ತಪಸ್ಸು ನಡೆದಿದೆ. ಪ್ರಪಂಚದ ಮೂರೂವರೆ ಬಿಲಿಯನ್ ಗಂಡು ಜನ್ಮದಲ್ಲಿ, ವಯಸ್ಸು ಹೊಂದುವಂಥ ಅಂದರೆ ನಲವತ್ತು ಶೇ. ಜನರಲ್ಲಿ ಈ ಜೀವದ ಆತ್ಮಬಂಧುವನ್ನು ಹುಡುಕಿಕೊಳ್ಳುವುದು ಅತಿ ಕ್ಲಿಷ್ಟಕರ ಜಿಗ್‌ಸಾ ಪಜಲ್ ಅಲ್ಲವೇ? ಅದನ್ನೀಗ ಬಿಡಿಸಿದ ತೃಪ್ತಿಗೆ ಗೆದ್ದ ಟ್ರೋಫಿ ಜೀವನದುದ್ದಕ್ಕೂ ಜೊತೆ ಇರುವ, ಬರುವ ಈ ಬೆಳಕು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ