ಪುಟಗಳು

12.11.10

ಗುಬ್ಬಚ್ಚಿ ಸುಂದರಿ!!

ನಮ್ಮನೆ ಉಪ್ಪರಿಗೆಯಲ್ಲಿ ನನ್ನ ಹಾಗೂ ಅಕ್ಕನ ಪುಟ್ಟ ಕೋಣೆ.ಈ ಬಾರಿ ಹಬ್ಬಕ್ಕೆ ಹೋದಾಗ ಹೊಸದಾಗಿ ಒಬ್ಬ ಅತಿಥಿ ನಮ್ಮೀ ಕೋಣೆಗೆ ಸೇರ್ಪಡೆಯಾಗಿದ್ರು..ಹೇಳೋದ್ ಕೇಳಿ ಯಾರೋ ಅನ್ಕೊಂಡ್ರಾ?
ಪುಟ್ಟ ಜೀವ ಗುಬ್ಬಚ್ಚಿ ಕಣ್ರೀ...
nammaneyoLage ಯಾವಾಗಲೂ 8-10 ಗುಬ್ಬಿಗಳು ಹಾರಾಡಿಕೊಂಡೇ ಇರುತ್ವೆ.ಅವಕ್ಕೆ ಸುಗ್ರಾಸ ಭೋಜನ ,ಉಪಚಾರ ಎಲ್ಲವೂ ಹೇರಳವಾಗಿ ದೊರೆಯುವುದರಿಂದ ನಿರ್ಭೀತವಾಗಿ ಇರುತ್ತವೆ.ಆದ್ರೆ ಈ ಗುಬ್ಬಚ್ಚಿ ವಿಶೇಷ ಅಂದ್ರೆ ನಮ್ ರೂಮ್ನ ಕನ್ನಡಿ ಎದರು ಕೂತು ಇಡೀ ದಿನ ಕನ್ನಡಿ ನೋಡುವುದು,ಕುಕ್ಕುವುದು...ನಾನೂ ಅದಕ್ಕೆ ತೊ೦ದರೆಯಾಗುತ್ತೆಂದು 1 ದಿನ ಅತ್ತ ಹೋಗಲಿಲ್ಲ.. ಹೊರಗಿನಿಂದಲೇ ನೋಡುತ್ತಿದ್ದೆ.ಆದ್ರೆ ಕನ್ನಡಿ ಬಿಟ್ಟು ಹಂದದ ಗುಬ್ಬಿಯನ್ನು ನೋಡುವಾಗ ಎಲ್ಲಿ ಸಾಯುವುದೋ ಎಂದು ಭಯವಾಯಿತು.ಕಾಲುಗಳನ್ನು ತಗೊಂಡು ಹೋಗಿ ಪಕ್ಕಕ್ಕಿಟ್ಟೆ..ಊಂಹೂ!ಪಕ್ಕದಲ್ಲೇ ನಿಂತರೂ ಹೆದರಿಕೆಯೇ ಇಲ್ಲ..ಅಮ್ಮ ಬಂದು ಏನ್ ಮಾಡುತ್ತೋ ನೋಡಣ ಅಂತ ಕನ್ನಡಿ ತಿರುಗಿಸಿ ಇಟ್ಟಳು.ಹೊರ ಹೋಗುವುದು,ಒಳ ಬರುವುದು,ಕನ್ನಡಿಗಾಗಿ ಹುಡುಕುವುದು...ಗುಬ್ಬಚ್ಚಿ full restless..
ಮರುದಿನ ಬೆಳಿಗ್ಗೆ ಮತ್ತೆ ಕನ್ನಡಿ ಸರಿ ಇಟ್ವಿ,ಎಲ್ಲಿತ್ತೋ ಹತ್ತು ನಿಮಿಷದಲ್ಲಿ ಕನ್ನಡಿಯ ಮೇಲೆ ಗುಬ್ಬಿ ಪ್ರತ್ಯಕ್ಷ..! ಕುತೂಹಲಗೊಂಡ ನಾವು ಮನೆಯವರೆಲ್ಲಾ ನಮ್ಮದೇ ಆದ ಕತೆ ಹೆಣೆದುಕೊಂಡು ಗುಬ್ಬಿಯ ನಡತೆಗೆ ಕಾರಣ ಕೊಟ್ಟುಕೊಂಡು ತೃಪ್ತಿ ಹೊಂದಲು ಪ್ರಯತ್ನಿಸಿದೆವು....ಬಹುಶಃ ಹಿಂದಿನ ಜನ್ಮದಲ್ಲಿ ರಾಜಕುಮಾರಿಯಾಗಿತ್ತೇನೋ ಅಥವಾ ಇನ್ನಾವುದೋ ಗುಬ್ಬಿಮರಿ ಒಳಗಿದೆ ಎಂದು ಬಿಡಿಸುವ ಪ್ರಯತ್ನವೋ ,ಅಥವಾ ಅದಕ್ಕೆ narciscistic personality disorder ಇರಬಹುದೇನೋ ಎಂದು ಮಾತಾಡಿಕೊಂಡೆವು..
ಅಮ್ಮ ಒಂದು ದಿನ ಕನ್ನಡಿಯನ್ನು ಅಲ್ಲೇ ಹಾಸಿಗೆ ಮೇಲಿಟ್ಟು ಗುಬ್ಬಿ ಕೂರುತಿದ್ದ ಜಾಗದಲ್ಲಿ ಕೈ ಇಟ್ಟುಕೊಂಡು ಮಲಗಿದಳು..ಕೈ ಮೇಲೇ ಬಂದು ಕುಳಿತಿತು..ನನಗೋ ಮೈ ಎಲ್ಲ ರೋಮಾಂಚನ!!ಹೂವಿನಂತಾ ಪುಟ್ಟ ಜೀವವೊಂದು ಅಮ್ಮನ ಅಂಗೈ ಮೇಲೇ ಪಿಳಿಪಿಳಿ ಕಣ್ಣು ಬಿಡುತ್ತಾ 'ಚೀವ್ ಚೀವ್ 'ಎನ್ನುತ್ತಿದ್ದರೆ ನಾನಂತೂ ಅಕ್ಷರಶಃ ಕುಣಿಯುತ್ತಿದ್ದೆ..
ಹೀಗೆ ಇಂದಿಗೆ ವಾರವಾಯಿತು..ಮೊನ್ನೆ ಮನೆಯಲ್ಲಿ ಹೋಮ ಇದ್ದಿದ್ರಿಂದ ನೆಂಟರೋ ನೆಂಟರು..ಮಕ್ಕಳೆಲ್ಲಾ 'ಗುಬ್ಬಚ್ಚಿ ಗುಬ್ಬಚ್ಚಿ' ಎಂದು ಕೂಗುತ್ತ ಹತ್ತಿರ ಹೋದಂತೆಲ್ಲ ನನಗೆ ಭಯ ..ಎಲ್ಲಿ ಗಾಬರಿಗೊಂಡ ಗುಬ್ಬಿ ಇನ್ನು ಮುಂದೆ ಬರುವುದಿಲ್ಲವೋ ಎಂದು.ಮಕ್ಕಳಿಗೆಲ್ಲಾ ಬೈದು ಹೊರ ಹಾಕಿ ರೂಮ್ಗೆ ಬೀಗ ಜಡಿದೆ.ನಿನ್ನೆ ಬೆಳಿಗ್ಗೆ ಹಾಸ್ಟೆಲ್ಗೆ ಹೊರಡುವ ಮುಂಚೆಯೊಮ್ಮೆ ಉಪ್ಪರಿಗೆಗೆ ಓಡಿ ಗುಬ್ಬಚ್ಚಿ ಇದೆ ಎಂದು ಖಾತ್ರಿ ಪಡಿಸಿಕೊಂಡು ಸಮಾಧಾನದ ನಿಟ್ಟುಸಿರು ಬಿಟ್ಟೆ..'ಟಾಟಾ' ಹೇಳಿ ಮನೆಯಿಂದ ಹೊರಬಿದ್ದೆ..ಈಗ phoneನಲ್ಲಿ ವಿಚಾರಿಸುವಾಗ 'ನನ್ ರೂಂ' ಹೋಗಿ 'ಗುಬ್ಬಿ ರೂಂ 'ಎಂದು badalaagiddu ನನ್ನ ಗಮನಕ್ಕೆ ಬಂದು ಇನ್ನಷ್ಟು ಸಂತಸವೇ ಆಯ್ತು..

(ಉದಯವಾಣಿಯಲ್ಲಿ ಪ್ರಕಟ)

1 ಕಾಮೆಂಟ್‌:

ರವಿ ಮುರ್ನಾಡು ಹೇಳಿದರು...

ನನಗೆ ಗೊತ್ತಿರಲಿಲ್ಲ ಬದುಕಿನಲ್ಲಿ ತಿಳಿದುಕೊಳ್ಳುವಂತಹದ್ದು, ಮತ್ತು ಅಪರೂಪವಾದದ್ದು ನನ್ನನ್ನು ಹುಡುಕಿಕೊಂಡು ಬರುತ್ತದೆ. ಅಂತ ಅದನ್ನು ಇಲ್ಲಿ ಈ ಲೇಖನದಲ್ಲಿ ಕಾಣುತ್ತಿದ್ದೇನೆ. ನವಿರು ಭಾವದ ಸುಂದರ ಚಿತ್ರಣ ನೋಡಿ ಆನಂದವಾಯಿತು. ಇದರಲ್ಲಿ ಒಂದು ಸ್ಪಷ್ಟವಾಯಿತು ಅದೃಷ್ಟ ಅನ್ನುವುದು ಪ್ರಯತ್ನದ ಪಕ್ಕದಲ್ಲಿರುತ್ತವೆ ಅಂತ.ನಿಮ್ಮ ಬರಹದ ತಾಕತ್ತು ಎಲೆ ಮರೆಯ ಕಾಯಿಯಾಗಿರಬಹುದು ಅದು ಬೇರೆಯವರನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ. ನಿಮ್ಮಬರಹದ ಶೈಲಿ ಚೆನ್ನಾಗಿದೆ. ಅದನ್ನು ಹಾಗೆಯೇ ಕಾಪಾಡಿ ಗೌರವಾನ್ವಿತರೆ. ಶುಭವಾಗಲಿ.