ಪುಟಗಳು

29.8.11

ಲಂಚ

ನೋಟಿನೊಳಗೆ ಕುಳಿತು ನಗುವ
ಬೊಚ್ಚು ಬಾಯಿಯ ಮುದುಕ ಗಾಂಧಿ
ಕಳ್ಳನಂತೆ ಟೇಲ್ಲಿನ್ನಡಿ ನುಸುಳಿದರು..
ಎಳೆದುಕೊಂಡ ಗಾಂಧೀ ಟೋಪಿಯವ
ತಾತನ ಬೋಳುತಲೆ ಕಂಡಾಗಲೇ
ಎದುರಿನವನ ತಲೆ ಬೋಳಿಸಿದ
ಅನುಭವದಿ ಸುಖ ಪಟ್ಟ!!
ಬೋಳಿಸಿಕೊಂಡ ಭೂಪ ಮುಜುಗರದಿ ಹೊರಬಂದ
ತನ್ನನೇ ಎಲ್ಲರೂ ನೋಡುತ್ತಿರುವ ಭ್ರಮೆಗೆ
ಸುತ್ತಲೂ ಕಳ್ಳ ದೃಷ್ಟಿ ಬೀರಿದ..
ಹಾದಿಬೀದಿಯ ತುಂಬಾ ಜನಜಂಗುಳಿ
ಎಲ್ಲರ ತಲೆಯಲ್ಲೂ ಬೋಳನ್ನು ಮುಚ್ಚಿದ
ಟೋನ್ನುಗಳು ಕಂಡಂತಾಯಿತು ..
ಎಲ್ಲರೊಳಗೊಂದಾದ ಖುಷಿಗೆ
ಅವನ ತಲೆಯಲ್ಲೂ ಟೋನ್ನಿನಂತೆ
ಕೂದಲು ಕುಳಿತಿತ್ತು!!!

4 ಕಾಮೆಂಟ್‌ಗಳು:

A.G.Viji, Bijapura. ಹೇಳಿದರು...

ನಿಮ್ಮ ಬರೆಯುವ ಶೈಲಿ ಇಷ್ಟವಾಯಿತು.

reshma ಹೇಳಿದರು...

dhanyavaadagalu vijiravare...

Ashweeja ಹೇಳಿದರು...

hey super kane.. thumba ishta aytu..

reshma ಹೇಳಿದರು...

thanks aashu:)