ಪುಟಗಳು

11.5.11

ಅಜ್ಜನ ನಿಟ್ಟುಸಿರು ೨೦-೨-೧೧
ಒಂದರ ಬೆನ್ನಿಗೊಂದು ಮಳೆಗಾಲ


ಬೊಗಸೆಯೊಡ್ಡಿದಶ್ಟೂ ಸೋರಿ ಹೋಗುವ ಬಾಲ್ಯ


ಗೆಳೆಯರೆಲ್ಲರೂ ಕೂಡಿ ಕುಣಿದು ಕುಪ್ಪಳಿಸಿದ್ದು


ನಕ್ಕು ನಗಿಸಿದ್ದು..


ಬಿದ್ದಾಗ ಆಸರೆಯಾಗಿದ್ದು..


ಆಲಿಕಲ್ಲುಗಳ ಬಾಚಿ ತಿಂದದ್ದು..


ಬೆಳೆಯುವ ಬಿರುಸಿಗೆ,ಬಳಲಿಕೆಗೆ


ಚೈತನ್ಯದಂತೆ 'ದೋ'ಎಂದು ಸುರಿದದ್ದು


ಮಕ್ಕಳಾಟವ ಕ್ಂಡು ನೆನಪುಗಳ ಮರುಕಳಿಕೆ


ಮೊಮ್ಮಕ್ಕಳಾಟದಿ ತಣಿವ ತಿರುಗಿ ಬಾಲ್ಯಕ್ಕೆ ಹೊರಳುವಾ ಬಯಕೆ
ಹನಿಹನಿಯಲ್ಲೂ ನೆನೆದಿದ್ದ ಮುಗ್ದತೆ ಆರಿದೆ


ಉತ್ತರಗಳ ಕಂಡ ಪ್ರಶ್ನೆಗಳು ಮತ್ತೆ ಪ್ರಶ್ನೆಯಾಗುಳಿಯದ ದೌರ್ಬಲ್ಯಕ್ಕೆ!
ನಿಟ್ಟುಸಿರು ಕೇಳುತಿದೆ,ಸೋರುವ ಆಕಾಶ


ಹುಟ್ಟಿಸಿದ ಕನಸುಗಳು ಕೊತ್ತ ನೆನಪುಗಳ ಸಮತೂಗುವುದೇ?!


(ಸೋರುವ ಆಕಾಶಕ್ಕೆ ನೆರೆತ ಕೂದಲೂ ನೆನೆಯಬಲ್ಲದೇ?)

2 ಕಾಮೆಂಟ್‌ಗಳು:

arun ಹೇಳಿದರು...

ಚೆನ್ನಾಗಿದೆ..!! :)
ಬೊಗಸೆಯೊಡ್ಡಿದಶ್ಟೂ ಸೋರಿ ಹೋಗುವ ಬಾಲ್ಯ..
ಸೋರುವ ಆಕಾಶಕ್ಕೆ ನೆರೆತ ಕೂದಲೂ ನೆನೆಯಬಲ್ಲದೇ?..
ಈ ಸಾಲುಗಳು ಇಷ್ಟವಾದವು .. :)

reshma ಹೇಳಿದರು...

dhanyavaadagalu...